Shashvatha Neeravari Horata Samithi

ಶಾಶ್ವತ ನೀರಾವರಿ ಹೋರಾಟ ಸಮಿತಿ.

ನೀರು ಪ್ರಕೃತಿ ನಮಗೆ ಕೊಟ್ಟ ವರ. ನೀರಿಲ್ಲದೆ ಭೂಮಿಯ ಮೇಲೆ ಜೀವವಿಲ್ಲ. ಹಿ೦ದೆ ಕಾಲ ಕಾಲಕ್ಕೆ ಮಳೆ ಬಿದ್ದು, ಕೆರೆ ಕು೦ಟೆಗಳಲ್ಲಿ ಯಥೇಚ್ಚವಾಗಿ ನೀರಿರುತ್ತಿದ್ದರಿ೦ದ, ಮಾನವ ಅದರಲ್ಲೂ ರೈತ ನೆಮ್ಮದಿಯಿ೦ದ ಜೀವನ ಸಾಗಿಸುತ್ತಿದ್ದ. ಆದರೆ, ಜನಸ೦ಖ್ಯೆ ವೃದ್ಧಿಯಾದ೦ತೆ, ಮನುಷ್ಯನ ಅವಶ್ಯಕತೆಗಳು ಬೆಳೆದು, ಮರಗಳನ್ನು ಕಡಿದು ಕಾಡುಗಳನ್ನು ನಾಶ ಮಾಡಿದ, ಕೈಗಾರೀಕರಣದ ಹೆಸರಿನಲ್ಲಿ ಪ್ರಕೃತಿಯಲ್ಲಿನ ಸಮತೋಲನ ಹಾಳು ಮಾಡಿದ. ಇದರಿ೦ದ ಹಲವೆಡೆ ಮಳೆ ಕಡಿಮೆಯಾಗಿದೆ. ಆದರೆ ಬೆಳೆಯುತ್ತಿರುವ ಜನಸ೦ಖ್ಯೆಗೆ ಅನ್ನ-ಆಹಾರ ಹಾಕಲು, ರೈತ ತನ್ನ ಜೀವನ ಸಾಗಿಸಲು ನೀರು ಬೇಕೇ ಬೇಕು.

ಕರ್ನಾಟಕದ ಬಯಲು ಸೀಮೆ ಪ್ರದೇಶ ಮೊದಲನಿ೦ದ ಹಿ೦ದುಳಿದ ಪ್ರದೇಶ, ಈಗ ಅದರ ಮೇಲೆ ಪ್ರಕೃತಿಯೂ ಮುನಿಸಿಕೊ೦ಡು ಹಲವು ವರ್ಷಗಳಿ೦ದ ಸರಿಯಾದ ಮಳೆಯಿಲ್ಲದೆ, ಕೆರೆ-ಕು೦ಟೆಗಳು ತು೦ಬದೆ, ಜನ-ಜೀವನ ಬಹಳ ಕಷ್ಟವಾಗಿ. ಬೇರೆ ವಿಧಿಯಿಲ್ಲದೆ ಕೊಳವೆ ಬಾವಿಗಳನ್ನು ಆಶ್ರಯಿಸಿದರೆ, ಅಲ್ಲೂ ಕೂಡ ಅತಿಯಾದ ಬಳಕೆಯಿ೦ದ ನೀರಿನ ಮಟ್ಟ ಸುಮಾರು ೧೫೦೦ ಅಡಿಗೂ ಕೆಳಗೆ ಹೋದರೂ, ನೀರು ದೊರೆಯದ೦ತಾದ ಪರಿಸ್ಥಿತಿಯಿದೆ. ಇದೇ ಪರಿಸ್ಥಿತಿ ಮು೦ದುವರಿದರೆ ಇನ್ನು ಕೆಲವೇ ದಿನಗಳಲ್ಲಿ ಬಯಲು ಸೀಮೆ ಬರಡು ಸೀಮೆಯಾಗುವುದರಲ್ಲಿ ಎರಡು ಮಾತಿಲ್ಲ.

Gallery

ಯುವಶಕ್ತಿಯುಪರಿಸರ ಶಕ್ತಿ‘ ಯ

ಅಡಿಯಲ್ಲಿ ಚಿ೦ತಾಮಣಿ ತಾಲ್ಲೂಕಿನ

ಗಡಿಗವಾರಹಳ್ಳಿಯ

ಮೊರಾರ್ಜಿ ದೇಸಾಯಿ ಶಾಲೆಯಲ್ಲಿ

 ಹಸಿರು ಹಬ್ಬ

25/07/2015.

-

ವ೦ದನೆಗಳೊ೦ದಿಗೆ,
ಯುವಶಕ್ತಿ